Posts

Showing posts from February, 2019

ಜಾಗತಿಕ ಭ್ರಷ್ಟಾಚಾರ ಸೂಚ್ಯಂಕ

  ಜಾಗತಿಕ ಭ್ರಷ್ಟಾಚಾರ ಸೂಚ್ಯಂಕ :  ಭಾರತಕ್ಕೆ - 78 ನೇ ಸ್ಥಾನ  ಜಾಗತಿಕ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ(Global Corruption Perceptions Index) ಹೊರಬಿದ್ದಿದ್ದು, ಭಾರತ ಮೂರು ಸ್ಥಾನ ಸುಧಾರಣೆ ಹೊಂದಿ - "78 ನೇ ಸ್ಥಾನ"ದಲ್ಲಿದೆ.  2017 ರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ ಭಾರತ - 81 ನೇ ಸ್ಥಾನದಲ್ಲಿತ್ತು.  ಅತ್ಯಂತ ಕಡಿಮೆ ಭ್ರಷ್ಟಾಚಾರವಿರುವ ದೇಶಗಳನ್ನು ಪಟ್ಟಿಯಲ್ಲಿ ಮೊದಲ ಸ್ಥಾನ - "ಡೆನ್ಮಾರ್ಕ್"   ಎರಡನೇ ಸ್ಥಾನ - "ನ್ಯೂಜಿಲೆಂಡ್"   ಮೂರನೇ ಸ್ಥಾನ - "ಸಿಂಗಪುರ"  ಚೀನಾ - 87 ನೇ ಸ್ಥಾನ  ಪಾಕಿಸ್ತಾನ - 117 ನೇ ಸ್ಥಾನ ಜಾಗತಿಕ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತದ ಸ್ಥಾನ - 41 ನೇ ಸ್ಥಾನ  ಇನ್ನೊವೇಟಿವ್ ದೇಶಗಳ ಪಟ್ಟಿಯಲ್ಲಿ ಭಾರತದ ಸ್ಥಾನ - 54 ನೇ ಸ್ಥಾನ

ಬಜೆಟ್ 2019 ರ ಮುಖ್ಯಾಂಶಗಳು

              ಬಜೆಟ್ 2019 ರ ಮುಖ್ಯಾಂಶಗಳು    ಬಜೆಟ್ ಮಂಡನೆ ಆರಂಭಿಸಿದ ಹಂಗಾಮಿ ಹಣಕಾಸು ಸಚಿವ ಪಿಯೂಷ್ ಗೋಯಲ್. ನರೇಂದ್ರ ಮೋದಿ ನೇತೃತ್ವದಲ್ಲಿ ಪಾರದರ್ಶಕ ಆಡಳಿತ ನೀಡಿದ್ದೇವೆ ಎಂದು ಹೇಳಿದ ಪಿಯೂಷ್ ಗೊಯಲ್. ಕಳೆದ ಐದು ವರ್ಷಗಳಲ್ಲಿ ಭಾರತ ಜಾಗತಿಕವಾಗಿ ಪ್ರಕಾಶಿಸುತ್ತಿದೆ. ಆರ್ಥಿಕ ವಲಯದಲ್ಲಿ ಭಾರತ ಆರನೇ ಸ್ಥಾನದಲ್ಲಿದೆ.  ಕಳೆದ ಸರ್ಕಾರಗಳಿಗೆ ಹೋಲಿಕೆ ಮಾಡಿದರೆ ಪ್ರಸಕ್ತ ಸರ್ಕಾರ ಹಣದುಬ್ಬರ ನಿಯಂತ್ರಣ ಮಾಡಿದೆ. ಜಿಡಿಪಿಯಲ್ಲಿ ಜಗತ್ತಿನ ಗಮನ ಸೆಳೆದಿದೆ. 2022 ರ ವೇಳೆಗೆ ನ್ಯೂ ಇಂಡಿಯಾ ನಿರ್ಮಾಣ. ಜಿ.ಎಸ್.ಟಿ. ಮತ್ತು ಇತರೆ ತೆರಿಗೆಗಳ ಮೂಲಕ ಆದಾಯ. ಕಳೆದ ಐದು ವರ್ಷಗಳಲ್ಲಿ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ. ಬಡವರು, ಹಿಂದುಳಿದ ವರ್ಗಗಳ ಏಳಿಗೆಗೆ ಯೋಜನೆ. ರಾಜ್ಯಗಳ ತೆರಿಗೆ ಪ್ರಮಾಣ ಶೇಕಡ 32 ರಿಂದ ಶೇಕಡ 42 ಕ್ಕೆ ಏರಿಸಿದ್ದೇವೆ.  ಕಳೆದ 5 ವರ್ಷಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ಒಂದು ಕೋಟಿಗೂ ಅಧಿಕ ಮನೆಗಳ ನಿರ್ಮಾಣ. ದೇಶದ 22ನೇ ಏಮ್ಸ್ ಹರಿಯಾಣದಲ್ಲಿ ಆರಂಭ.  ಎಲ್ಲ ವರ್ಗದ ಜನತೆಗೆ ಮೀಸಲಾತಿ ನೀಡುವ ಮೂಲಕ ಸಮಾನತೆ. ರೈತರ ಅನುಕೂಲಕ್ಕಾಗಿ ಹೊಸ ಯೋಜನೆಗಳ ಅನುಷ್ಠಾನಕ್ಕೆ ಸಿದ್ಧತೆ. ದೇಶದ ಎಲ್ಲಾ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ಕ್ರಮ. ರೈತರ ನೆರವಿಗಾಗಿ ಪ್...