ಬಜೆಟ್ 2019 ರ ಮುಖ್ಯಾಂಶಗಳು


  •              ಬಜೆಟ್ 2019 ರ ಮುಖ್ಯಾಂಶಗಳು
  •    ಬಜೆಟ್ ಮಂಡನೆ ಆರಂಭಿಸಿದ ಹಂಗಾಮಿ ಹಣಕಾಸು ಸಚಿವ ಪಿಯೂಷ್ ಗೋಯಲ್.
  • ನರೇಂದ್ರ ಮೋದಿ ನೇತೃತ್ವದಲ್ಲಿ ಪಾರದರ್ಶಕ ಆಡಳಿತ ನೀಡಿದ್ದೇವೆ ಎಂದು ಹೇಳಿದ ಪಿಯೂಷ್ ಗೊಯಲ್.
  • ಕಳೆದ ಐದು ವರ್ಷಗಳಲ್ಲಿ ಭಾರತ ಜಾಗತಿಕವಾಗಿ ಪ್ರಕಾಶಿಸುತ್ತಿದೆ. ಆರ್ಥಿಕ ವಲಯದಲ್ಲಿ ಭಾರತ ಆರನೇ ಸ್ಥಾನದಲ್ಲಿದೆ.
  •  ಕಳೆದ ಸರ್ಕಾರಗಳಿಗೆ ಹೋಲಿಕೆ ಮಾಡಿದರೆ ಪ್ರಸಕ್ತ ಸರ್ಕಾರ ಹಣದುಬ್ಬರ ನಿಯಂತ್ರಣ ಮಾಡಿದೆ. ಜಿಡಿಪಿಯಲ್ಲಿ ಜಗತ್ತಿನ ಗಮನ ಸೆಳೆದಿದೆ.
  • 2022 ರ ವೇಳೆಗೆ ನ್ಯೂ ಇಂಡಿಯಾ ನಿರ್ಮಾಣ.
  • ಜಿ.ಎಸ್.ಟಿ. ಮತ್ತು ಇತರೆ ತೆರಿಗೆಗಳ ಮೂಲಕ ಆದಾಯ.
  • ಕಳೆದ ಐದು ವರ್ಷಗಳಲ್ಲಿ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು.
  • ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ.
  • ಬಡವರು, ಹಿಂದುಳಿದ ವರ್ಗಗಳ ಏಳಿಗೆಗೆ ಯೋಜನೆ.
  • ರಾಜ್ಯಗಳ ತೆರಿಗೆ ಪ್ರಮಾಣ ಶೇಕಡ 32 ರಿಂದ ಶೇಕಡ 42 ಕ್ಕೆ ಏರಿಸಿದ್ದೇವೆ.
  •  ಕಳೆದ 5 ವರ್ಷಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ಒಂದು ಕೋಟಿಗೂ ಅಧಿಕ ಮನೆಗಳ ನಿರ್ಮಾಣ.
  • ದೇಶದ 22ನೇ ಏಮ್ಸ್ ಹರಿಯಾಣದಲ್ಲಿ ಆರಂಭ.
  •  ಎಲ್ಲ ವರ್ಗದ ಜನತೆಗೆ ಮೀಸಲಾತಿ ನೀಡುವ ಮೂಲಕ ಸಮಾನತೆ.
  • ರೈತರ ಅನುಕೂಲಕ್ಕಾಗಿ ಹೊಸ ಯೋಜನೆಗಳ ಅನುಷ್ಠಾನಕ್ಕೆ ಸಿದ್ಧತೆ.
  • ದೇಶದ ಎಲ್ಲಾ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ಕ್ರಮ.
  • ರೈತರ ನೆರವಿಗಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಘೋಷಣೆ. ರೈತರ ಬ್ಯಾಂಕ್ ಖಾತೆಗೆ ನೇರವಾಗಿ 6,000 ರೂ. ವರ್ಗಾವಣೆ.
  • ಜಾನುವಾರು ಸಾಕಾಣಿಕೆಗೆ ಬೇಕಾದ ಸಂಪೂರ್ಣ ನೆರವು.
  • ಹೊಸ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡುವ ಮೂಲಕ ನಿರುದ್ಯೋಗ ನಿರ್ಮೂಲನೆಗೆ ಕ್ರಮ.
  • ಸಕಾಲಕ್ಕೆ ಸಾಲ ಪಾವತಿಸಿದರೆ ಶೇಕಡಾ ಎರಡರಷ್ಟು ಬಡ್ಡಿ ಮನ್ನಾ.
  • ರಕ್ಷಣಾ ಬಜೆಟ್ 3 ಲಕ್ಷ ಕೋಟಿ ರೂಪಾಯಿಗಳಿಗೆ ಹೆಚ್ಚಳ.
  • OROP ಯೋಜನೆಗೆ 35 ಸಾವಿರ ಕೋಟಿ ರೂಪಾಯಿ ಮೀಸಲು.
  • ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಮೂರು ಪಟ್ಟು ಹೆಚ್ಚಳ.
  • ಹೆದ್ದಾರಿಗಳ ನಿರ್ಮಾಣದಲ್ಲಿ ಭಾರತ ವಿಶ್ವದಲ್ಲೇ ಅಗ್ರಗಣ್ಯ.
  • ಮೇಕ್ ಇನ್ ಇಂಡಿಯಾ ಅಡಿ 12 ಲಕ್ಷ ಯುವಕರಿಗೆ ಉದ್ಯೋಗ.
  • ಮೊಬೈಲ್ ಡೇಟಾ ಬಳಕೆಯಲ್ಲಿ 50 ಪಟ್ಟು ಹೆಚ್ಚಳ.
  •  ಭಾರತೀಯ ಚಿತ್ರರಂಗಕ್ಕೆ ಏಕಗವಾಕ್ಷಿ ಪದ್ದತಿ ಜಾರಿ.
  •  ಐದು ವರ್ಷಗಳಲ್ಲಿ ಒಂದು ಲಕ್ಷ ಡಿಜಿಟಲ್ ಗ್ರಾಮಗಳ ನಿರ್ಮಾಣ.
  • ಜನಧನ್ ಯೋಜನೆ ಅಡಿ 34 ಕೋಟಿ ಬ್ಯಾಂಕ್ ಖಾತೆ.
  • ಐಟಿ ಇಲಾಖೆ ಸಂಪೂರ್ಣವಾಗಿ ಆನ್ಲೈನ್ ಆಗಿದೆ.
  • ತೆರಿಗೆ ಪಾವತಿಗೆ 24 ಗಂಟೆಗಳ ಆನ್ಲೈನ್ ಸೇವೆ.
  • ಶೀಘ್ರದಲ್ಲೇ ಏಳನೇ ವೇತನ ಆಯೋಗದ ಶಿಫಾರಸ್ಸು ಜಾರಿ.
  • ಆದಾಯ ತೆರಿಗೆ 12 ಲಕ್ಷ ಕೋಟಿ ರೂಪಾಯಿ ಪಾವತಿಯಾಗಿದೆ.

Comments

Popular posts from this blog

ಪ್ರಮುಖ ಬೆಳೆಗಳು ಮತ್ತು ರಾಜ್ಯಗಳು

ಇಸ್ರೋ - (ಭಾರತದ ಅಂತರಿಕ್ಷ ಸಂಶೋಧನಾ ಸಂಸ್ಥೆ )