Posts

ಹೆಚ್ಚು ಆದಾಯ ಹೊಂದಿರೋ ದೇವಸ್ಥಾನಗಳ ಪಟ್ಟಿ

ಹೆಚ್ಚು ಆದಾಯ ಹೊಂದಿರೋ ದೇವಸ್ಥಾನಗಳ ಪಟ್ಟಿ ಬಿಡುಗಡೆ: ಮೊದಲ ಸ್ಥಾನ ಕಾಯ್ದುಕೊಂಡ ಕುಕ್ಕೆ ಸುಬ್ರಹ್ಮಣ್ಯ! ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವಂತಹ ರಾಜ್ಯದಲ್ಲಿ ಅತಿ ಹೆಚ್ಚು ಆದಾಯ ಹೊಂದಿರುವ ದೇವಾಲಯಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಪ್ರಮುಖ 10 ದೇವಾಲಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಬಾರಿಯು ಕೂಡ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ವಾರ್ಷಿಕ ಅಂದಾಜು 100 ಕೋಟಿ ರೂ. ಆದಾಯದೊಂದಿಗೆ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ.  ಉಡುಪಿಯ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನ 2ನೇಸ್ಥಾನ ಕಟೀಲು ದುರ್ಗಾಪರಮೇಶ್ವರಿ 3ನೇ ಸ್ಥಾನ  ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ 4ನೇ ಸ್ಥಾನ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ 5ನೇ ಸ್ಥಾನ ಬೆಳಗಾವಿಯ ಸವದತ್ತಿ ಯಲ್ಲಮ್ಮ ದೇವಸ್ಥಾನ 6ನೇ ಸ್ಥಾನ ಶ್ರೀ ಮಂದಾರ್ತಿ ದೇವಸ್ಥಾನ 7ನೇ ಸ್ಥಾನ ಪಡೆದುಕೊಂಡಿದೆ. ಕೊಪ್ಪಳದ ಗುಳ್ಳಗಮ್ಮನ ದೇವಸ್ಥಾನ, ಬೆಂಗಳೂರಿನ ಬನಶಂಕರಿ ದೇವಸ್ಥಾನ ಮತ್ತು ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ 8 ರಿಂದ 10 ಕೋಟಿ ರೂ. ಆದಾಯದೊಂದಿಗೆ ಕೊನೆಯ ಮೂರು ಸ್ಥಾನವನ್ನು ಪಡೆದುಕೊಂಡಿದೆ

ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು

ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು ಪ್ರಧಾನಮಂತ್ರಿ ಜನ್ ಧನ್ ಯೋಜನೆ ಯಾವಗಾ ಜಾರಿಗೆ ಬಂತು? 2014 ಆಗಸ್ಟ್ ೨೮ ಸ್ವಚ್ಛ ಭಾರತ ಯೋಜನೆ ಯಾವಾಗ ಜಾರಿಗೆ ಬಂದಿತು? ೨೦೧೪ ಅಕ್ಟೋಬರ್ ೨ ಪಂಡಿತ ದೀನದಯಾಳ ಉಪಾಧ್ಯಾಯ ಶ್ರಮಮೆವ ಜಯತೆ ಕಾರ್ಯಕ್ರಮ ಯಾವಗ ಜಾರಿಗೆ ಬಂದಿತು? ೨೦೧೪ ಅಕ್ಟೋಬರ್ ೧೬ ಮುದ್ರಾ ಬ್ಯಾಂಕ್ ಯೋಜನೆ ಯಾವಾಗ ಜಾರಿಗೆ ಬಂದಿತು ೨೦೧೫ ಎಪ್ರಿಲ್ ೦೮ ಭೇಟಿ ಬಚಾವೊ ಭೇಟಿ ಪಡಾವೊ ಯೋಜನೆ ಯಾವಾಗ ಜಾರಿಗೆ ಬಂದಿತು  ೨೦೧೪ ಜನೆವರಿ ೨೨ ಸುಕನ್ಯಾ ಸಮೃದ್ಧಿ ಯೋಜನೆ ಯಾವಾಗ ಜಾರಿಗೆ ಬಂದಿತು? ೨೦೧೫ ಜನವರಿ ೨೨ ಸ್ಮಾರ್ಟ್ ಸಿಟಿ ಯೋಜನೆ ಯಾವಾಗ ಜಾರಿಗೆ ಬಂದಿತು? ೨೦೧೫ ಎಪ್ರಿಲ್ ೩೦ ನವಾಮಿ ಗಂಗೆ ಯೋಜನೆ ಯಾವಾಗ ಜಾರಿಗೆ ಬಂದಿತು? ೨೦೧೬ ಜುಲೈ ೦೮ ಸ್ಟಾರ್ಟ್ ಅಪ್ ಇಂಡಿಯಾ ಯೋಜನೆ ಯಾವಾಗ ಜಾರಿಗೆ ಬಂದಿತು? ೨೦೧೬ ಜನವರಿ ೧೬ ಸ್ಕಿಲ್ ಇಂಡಿಯಾ ಯೋಜನೆ ಯಾವಾಗ ಜಾರಿಗೆ ಬಂದಿತು? ೨೦೧೫ ಜುಲೈ ೧೫

55ನೇ 'ಜ್ಞಾನಪೀಠ ಪ್ರಶಸ್ತಿ

55ನೇ 'ಜ್ಞಾನಪೀಠ ಪ್ರಶಸ್ತಿ ಮಲಯಾಳಂ ಹಿರಿಯ ಕವಿ 'ಅಕ್ಕಿತಂ ಅಚ್ಯುತ್ತನ್'ಗೆ ಒಲಿದ ಸಾಹಿತ್ಯ ಮುಕುಟ 55ನೇ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ ಇದೀಗ ಬಿಡುಗಡೆಯಾಗಿದೆ. 55ನೇ ಜ್ಞಾನಪೀಠ ಪ್ರಶಸ್ತಿಯನ್ನು ಇದೀಗ ಮಲೆಯಾಳಂನ ಹಿರಿಯ ಸಾಹಿತಿ 93 ವರ್ಷದ ಅಕ್ಕೀತಂ, ಅವರು ಭಾಜನರಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿನ ಸೇವೆಗಾಗಿ ಭಾರತದಲ್ಲಿ ನೀಡಲಾಗುವ ಅತ್ಯಂತ ಪರಮೋಚ್ಛ ಪ್ರಶಸ್ತಿ ಅಂದ್ರೇ ಅದು, ಜ್ಞಾನಪೀಠ ಪ್ರಶಸ್ತಿಯಾಗಿದೆ. ಇಂತಹ 55ನೇ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಬಾರಿ ಕೇರಳ ಸಾಹಿತ್ಯಕ್ಕೆ ಹೊಸಗಾಳಿ ತಂದುಕೊಟ್ಟಂತ ಅಕ್ಕೀತಂ ಅವರಿಗೆ ಸಂದಿದೆ. ಮಲೆಯಾಳಂ ಭಾಷೆಯ ಹಿರಿಯ ಕವಿ ಎನಿಸಿರುವ ಅಕ್ಕೀತಂ ಅಚ್ಯುತ್ತನ್ ನಂಬೂದಿರಿಯವರಿಗೆ 93 ವರ್ಷ. ಕೇರಳದ ಪಲಕ್ಕಾಡ್ ನಲ್ಲಿ ಜನಿಸಿದ ಇವರು, ಮಲೆಯಾಳಂ ಭಾಷೆಯಲ್ಲಿ ಕವನ, ನಾಟಕ, ಸಣ್ಣಕತೆಗಳ ಸಾಹಿತ್ಯ ಸೇವೆಯನ್ನು ಸಲ್ಲಿಸಿದ್ದಾರೆ. ಇಂತಹ ಸಾಹಿತ್ಯ ಕೃಷಿಕರಿಗೆ ಇದೀಗ ದೇಶದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ ಸಂದಿದೆ. ಈ ಮೊದಲು ಪದ್ಮಶ್ರೀ, ಅಖಿಲ ಕೇರಳ ಇಜುತಚಂ ಸಮಾಜಂ ಪ್ರಶಸ್ತಿ ಸೇರಿದಂತೆ ಇತರೆ ಅನೇಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. 

ಜಾಗತಿಕ ಭ್ರಷ್ಟಾಚಾರ ಸೂಚ್ಯಂಕ

  ಜಾಗತಿಕ ಭ್ರಷ್ಟಾಚಾರ ಸೂಚ್ಯಂಕ :  ಭಾರತಕ್ಕೆ - 78 ನೇ ಸ್ಥಾನ  ಜಾಗತಿಕ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕ(Global Corruption Perceptions Index) ಹೊರಬಿದ್ದಿದ್ದು, ಭಾರತ ಮೂರು ಸ್ಥಾನ ಸುಧಾರಣೆ ಹೊಂದಿ - "78 ನೇ ಸ್ಥಾನ"ದಲ್ಲಿದೆ.  2017 ರ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕದಲ್ಲಿ ಭಾರತ - 81 ನೇ ಸ್ಥಾನದಲ್ಲಿತ್ತು.  ಅತ್ಯಂತ ಕಡಿಮೆ ಭ್ರಷ್ಟಾಚಾರವಿರುವ ದೇಶಗಳನ್ನು ಪಟ್ಟಿಯಲ್ಲಿ ಮೊದಲ ಸ್ಥಾನ - "ಡೆನ್ಮಾರ್ಕ್"   ಎರಡನೇ ಸ್ಥಾನ - "ನ್ಯೂಜಿಲೆಂಡ್"   ಮೂರನೇ ಸ್ಥಾನ - "ಸಿಂಗಪುರ"  ಚೀನಾ - 87 ನೇ ಸ್ಥಾನ  ಪಾಕಿಸ್ತಾನ - 117 ನೇ ಸ್ಥಾನ ಜಾಗತಿಕ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತದ ಸ್ಥಾನ - 41 ನೇ ಸ್ಥಾನ  ಇನ್ನೊವೇಟಿವ್ ದೇಶಗಳ ಪಟ್ಟಿಯಲ್ಲಿ ಭಾರತದ ಸ್ಥಾನ - 54 ನೇ ಸ್ಥಾನ

ಬಜೆಟ್ 2019 ರ ಮುಖ್ಯಾಂಶಗಳು

              ಬಜೆಟ್ 2019 ರ ಮುಖ್ಯಾಂಶಗಳು    ಬಜೆಟ್ ಮಂಡನೆ ಆರಂಭಿಸಿದ ಹಂಗಾಮಿ ಹಣಕಾಸು ಸಚಿವ ಪಿಯೂಷ್ ಗೋಯಲ್. ನರೇಂದ್ರ ಮೋದಿ ನೇತೃತ್ವದಲ್ಲಿ ಪಾರದರ್ಶಕ ಆಡಳಿತ ನೀಡಿದ್ದೇವೆ ಎಂದು ಹೇಳಿದ ಪಿಯೂಷ್ ಗೊಯಲ್. ಕಳೆದ ಐದು ವರ್ಷಗಳಲ್ಲಿ ಭಾರತ ಜಾಗತಿಕವಾಗಿ ಪ್ರಕಾಶಿಸುತ್ತಿದೆ. ಆರ್ಥಿಕ ವಲಯದಲ್ಲಿ ಭಾರತ ಆರನೇ ಸ್ಥಾನದಲ್ಲಿದೆ.  ಕಳೆದ ಸರ್ಕಾರಗಳಿಗೆ ಹೋಲಿಕೆ ಮಾಡಿದರೆ ಪ್ರಸಕ್ತ ಸರ್ಕಾರ ಹಣದುಬ್ಬರ ನಿಯಂತ್ರಣ ಮಾಡಿದೆ. ಜಿಡಿಪಿಯಲ್ಲಿ ಜಗತ್ತಿನ ಗಮನ ಸೆಳೆದಿದೆ. 2022 ರ ವೇಳೆಗೆ ನ್ಯೂ ಇಂಡಿಯಾ ನಿರ್ಮಾಣ. ಜಿ.ಎಸ್.ಟಿ. ಮತ್ತು ಇತರೆ ತೆರಿಗೆಗಳ ಮೂಲಕ ಆದಾಯ. ಕಳೆದ ಐದು ವರ್ಷಗಳಲ್ಲಿ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ. ಬಡವರು, ಹಿಂದುಳಿದ ವರ್ಗಗಳ ಏಳಿಗೆಗೆ ಯೋಜನೆ. ರಾಜ್ಯಗಳ ತೆರಿಗೆ ಪ್ರಮಾಣ ಶೇಕಡ 32 ರಿಂದ ಶೇಕಡ 42 ಕ್ಕೆ ಏರಿಸಿದ್ದೇವೆ.  ಕಳೆದ 5 ವರ್ಷಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ಒಂದು ಕೋಟಿಗೂ ಅಧಿಕ ಮನೆಗಳ ನಿರ್ಮಾಣ. ದೇಶದ 22ನೇ ಏಮ್ಸ್ ಹರಿಯಾಣದಲ್ಲಿ ಆರಂಭ.  ಎಲ್ಲ ವರ್ಗದ ಜನತೆಗೆ ಮೀಸಲಾತಿ ನೀಡುವ ಮೂಲಕ ಸಮಾನತೆ. ರೈತರ ಅನುಕೂಲಕ್ಕಾಗಿ ಹೊಸ ಯೋಜನೆಗಳ ಅನುಷ್ಠಾನಕ್ಕೆ ಸಿದ್ಧತೆ. ದೇಶದ ಎಲ್ಲಾ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ಕ್ರಮ. ರೈತರ ನೆರವಿಗಾಗಿ ಪ್...
ಭಾರತ್ ರತ್ನ  1. ನಾನಾಜಿ ದೇಶ್ಮುಖ್ (ಮರಣೋತ್ತರ) 2. ಡಾ. ಭೂಪನ್ ಹಜಾರಿಕಾ (ಮರಣೋತ್ತರ) 3. ಪ್ರಣಬ್ ಮುಖರ್ಜಿ  ಪದ್ಮ ವಿಭೂಷನ್ 1. ಶ್ರೀಮತಿ ತೇಜನ್ ಬಾಯಿ - ಆರ್ಟ್-ವೋಕಲ್ಸ್-ಫೋಕ್ - ಛತ್ತೀಸ್ಗಢ 2. ಶ್ರೀ ಇಸ್ಮಾಯಿಲ್ ಒಮರ್ ಗುಲೆಲೆ (ವಿದೇಶಿ) - ಸಾರ್ವಜನಿಕ ವ್ಯವಹಾರಗಳು - ಜಿಬೌಟಿ 3. ಶ್ರೀ ಅನಿಲ್ ಕುಮಾರ್ ಮಣಿಭಾಯಿ ನಾಯ್ಕ್ - ವಾಣಿಜ್ಯ ಮತ್ತು ಕೈಗಾರಿಕೆ-ಮೂಲಸೌಕರ್ಯ - ಮಹಾರಾಷ್ಟ್ರ 4. ಶ್ರೀ ಬಲ್ವಂತ್ ಮೊರೇಶ್ವರ್ ಪುರಂಡೇರ್ - ಕಲೆ-ಆಕ್ಟ್-ಥಿಯೇಟರ್ - ಮಹಾರಾಷ್ಟ್ರ   ಪದ್ಮಭೂಷಣ 1. ಶ್ರೀ ಜಾನ್ ಚೇಂಬರ್ಸ್ (ವಿದೇಶಿ) - ವಾಣಿಜ್ಯ ಮತ್ತು ಕೈಗಾರಿಕೆ-ತಂತ್ರಜ್ಞಾನ - ಅಮೇರಿಕಾ 2. ಶ್ರೀ ಸುಖದೇವ್ ಸಿಂಗ್ ಧಿಂಡ್ಸಾ - ಪಬ್ಲಿಕ್ ಅಫೇರ್ಸ್ - ಪಂಜಾಬ್ 3. ಶ್ರೀ ಪ್ರವೀಣ್ ಗೋರ್ಧನ್ (ವಿದೇಶಿ) - ಸಾರ್ವಜನಿಕ ವ್ಯವಹಾರ - ದಕ್ಷಿಣ ಆಫ್ರಿಕಾ 4. ಶ್ರೀ ಮಹಾಶೇ ಧರಣಂ ಪಾಲ್ ಗುಲಾಟಿ - ವಾಣಿಜ್ಯ ಮತ್ತು ಕೈಗಾರಿಕೆ-ಆಹಾರ ಸಂಸ್ಕರಣಾ - ದೆಹಲಿ 5. ಶ್ರೀ ದರ್ಶನ್ ಲಾಲ್ ಜೈನ್ - ಸಮಾಜ ಕಾರ್ಯ - ಹರಿಯಾಣ 6. ಶ್ರೀ ಅಶೋಕ್ ಲಕ್ಷ್ಮಣ ರಾವ್ ಕುಕಡೆ - ಮೆಡಿಸಿನ್-ಕೈಗೆಟುಕುವ ಆರೋಗ್ಯ-ಮಹಾರಾಷ್ಟ್ರ 7. ಶ್ರೀ ಕರಿಯಾ ಮುಂಡಾ - ಪಬ್ಲಿಕ್ ಅಫೇರ್ಸ್ - ಜಾರ್ಖಂಡ್ 8. ಶ್ರೀ ಬುಧದಿತ್ಯ ಮುಖರ್ಜಿ - ಆರ್ಟ್-ಮ್ಯೂಸಿಕ್-ಸಿಟಾರ್ - ಪಶ್ಚಿಮ ಬಂಗಾಳ 9. ಶ್ರೀ ಮೋಹನ್ ಲಾಲ್ ವಿಶ್ವನಾಥನ್ ನಾಯರ್ - ಕ...

ಇಸ್ರೋ - (ಭಾರತದ ಅಂತರಿಕ್ಷ ಸಂಶೋಧನಾ ಸಂಸ್ಥೆ )

  ಇಸ್ರೋ - (ಭಾರತದ ಅಂತರಿಕ್ಷ ಸಂಶೋಧನಾ ಸಂಸ್ಥೆ ) (ISRO - Indian Space Research Organisation) ಸ್ಥಾಪನೆ - 15 - ಆಗಸ್ಟ್ - 1969 ಕೇಂದ್ರ ಕಚೇರಿ - ಬೆಂಗಳೂರು, ಕರ್ನಾಟಕ,   ಉಡಾವಣ ಕೇಂದ್ರ - ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ, ಶ್ರೀಹರಿಕೋಟಾ, ಆಂಧ್ರಪ್ರದೇಶ ಇಸ್ರೊದ ಪ್ರಸ್ತುತ ಅಧ್ಯಕ್ಷರು - ಕೆ ಶಿವನ್  ಇಸ್ರೋದ ಪ್ರಥಮ ಅಧ್ಯಕ್ಷ - ವಿಕ್ರಮ್ ಸಾರಾಭಾಯಿ ಇಸ್ರೋದ ದೀರ್ಘಾವಧಿ ಅಧ್ಯಕ್ಷ - ಸತೀಶ್ ಧವನ್ ಮೈಕ್ರೋಸ್ಯಾಟ್‌-ಆರ್‌' ಮತ್ತು "ಕಲಾಂಸ್ಯಾಟ್‌- ವಿ2' -ಉಪಗ್ರಹಗಳ ಯಶಸ್ವಿ*  ಉಡಾವಣೆ - ಸತೀಶ್‌ ಧವನ್‌ ಬಾಹ್ಯಾಕಾಶ ನಿಲ್ದಾಣದಿಂದ  ಉಡಾವಣಾ ವಾಹಕ - ‘ ಪಿಎಸ್‌ಎಸ್‌ವಿ– ಸಿ44’  ಇದು ಇಸ್ರೋ ನಿರ್ಮಿತ ಸೇನಾ ಇಮೇಜಿಂಗ್‌ ಉಪಗ್ರಹ.  ಇದರ ಬಳಕೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಹಾಗೂ ಸೇನೆಗಾಗಿ ಮೀಸಲು. ಕಲಾಂಸ್ಯಾಟ್‌-ವಿ2 ಚೆನ್ನೈನ "ಸ್ಪೇಸ್‌ ಕಿಡ್ಸ್‌ ಇಂಡಿಯಾ'ದ ಐವರು ವಿದ್ಯಾರ್ಥಿಗಳು ನಿರ್ಮಿಸಿರುವ ಉಪಗ್ರಹ.  ಈ ಉಪಗ್ರಹವನ್ನು - ನ್ಯಾನೊ ಉಪಗ್ರಹಗಳ ಸಂಪರ್ಕ ವ್ಯವಸ್ಥೆಯ ಅಧ್ಯಯನಕ್ಕೆ ಪ್ರಾಯೋಗಿಕವಾಗಿ ಬಳಸಲು ಉದ್ದೇಶಿಸಲಾಗಿದೆ. ಈ ಉಪಗ್ರಹದಿಂದ - ವಿಪತ್ತು ನಿರ್ವಹಣೆ ಸಹಕಾರಿಯಾಗಲಿದೆ.