55ನೇ 'ಜ್ಞಾನಪೀಠ ಪ್ರಶಸ್ತಿ
55ನೇ 'ಜ್ಞಾನಪೀಠ ಪ್ರಶಸ್ತಿ
55ನೇ ಜ್ಞಾನಪೀಠ ಪ್ರಶಸ್ತಿಯನ್ನು ಇದೀಗ ಮಲೆಯಾಳಂನ ಹಿರಿಯ ಸಾಹಿತಿ 93 ವರ್ಷದ ಅಕ್ಕೀತಂ, ಅವರು ಭಾಜನರಾಗಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿನ ಸೇವೆಗಾಗಿ ಭಾರತದಲ್ಲಿ ನೀಡಲಾಗುವ ಅತ್ಯಂತ ಪರಮೋಚ್ಛ ಪ್ರಶಸ್ತಿ ಅಂದ್ರೇ ಅದು, ಜ್ಞಾನಪೀಠ ಪ್ರಶಸ್ತಿಯಾಗಿದೆ. ಇಂತಹ 55ನೇ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಬಾರಿ ಕೇರಳ ಸಾಹಿತ್ಯಕ್ಕೆ ಹೊಸಗಾಳಿ ತಂದುಕೊಟ್ಟಂತ ಅಕ್ಕೀತಂ ಅವರಿಗೆ ಸಂದಿದೆ.
ಮಲೆಯಾಳಂ ಭಾಷೆಯ ಹಿರಿಯ ಕವಿ ಎನಿಸಿರುವ ಅಕ್ಕೀತಂ ಅಚ್ಯುತ್ತನ್ ನಂಬೂದಿರಿಯವರಿಗೆ 93 ವರ್ಷ. ಕೇರಳದ ಪಲಕ್ಕಾಡ್ ನಲ್ಲಿ ಜನಿಸಿದ ಇವರು, ಮಲೆಯಾಳಂ ಭಾಷೆಯಲ್ಲಿ ಕವನ, ನಾಟಕ, ಸಣ್ಣಕತೆಗಳ ಸಾಹಿತ್ಯ ಸೇವೆಯನ್ನು ಸಲ್ಲಿಸಿದ್ದಾರೆ.
ಇಂತಹ ಸಾಹಿತ್ಯ ಕೃಷಿಕರಿಗೆ ಇದೀಗ ದೇಶದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ ಸಂದಿದೆ. ಈ ಮೊದಲು ಪದ್ಮಶ್ರೀ, ಅಖಿಲ ಕೇರಳ ಇಜುತಚಂ ಸಮಾಜಂ ಪ್ರಶಸ್ತಿ ಸೇರಿದಂತೆ ಇತರೆ ಅನೇಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
Comments
Post a Comment